ಕಾರ್ಯಕ್ರಮಗಳು

ಶ್ರೀ ಗವಿ ಸಿದ್ದೇಶ್ವರ ಗುಹಾ ದೇವಾಲಯ, ಆಗಳಿ – ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಮುದಾಯ ಸೇವೆಯ ಕೇಂದ್ರ

ಶ್ರೀ ಗವಿ ಸಿದ್ದೇಶ್ವರ ಗುಹಾ ದೇವಾಲಯ, ಆಗಳಿ, ತನ್ನ ಭಕ್ತಿಗರ್ಭಿತ ವಾತಾವರಣ ಮತ್ತು ಆಧ್ಯಾತ್ಮಿಕ ಶಕ್ತಿ ಪ್ರಸಿದ್ಧವಾಗಿದೆ. ದೇವಾಲಯವು ಗ್ರಾಮಾಂತರ ಪ್ರದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇತ್ತೀಚಿನ 2026 ರಲ್ಲಿ ದೇವಾಲಯದ ಆವರಣದಲ್ಲಿ ನಡೆಯುದ  ವಿಶೇಷ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಿನ ಜನಸಮೂಹವನ್ನು ಆಕರ್ಷಿಸಿವೆ.

ಈ ಸಂದರ್ಭದಲ್ಲಿ ಗಣ್ಯರು, ಜನಪ್ರಿಯ ನಾಯಕರು ಮತ್ತು ಸಮಾಜದ ಅಭಿವೃದ್ದಿಗೆ ಸಕ್ರಿಯವಾಗಿ ಕೆಲಸ ಮಾಡುವ ನಾಯಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಕ್ಷೇತ್ರದ ಶಾಸಕರಾದ ಶ್ರೀ ಮಂತರ್ ಗೌಡ, ಗುಂಡ್ಲುಪೇಟೆ ಶಾಸಕರಾದ ಶ್ರೀ ಗಣೇಶ್ ಪ್ರಸಾದ್, ಹಾಗೂ ಮಾಜಿ ಸಚಿವರು ಮತ್ತು ಶಾಸಕರಾದ ಶ್ರೀ ಅಪ್ಪಚ್ಚು ರಂಜನ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಲವಾರು ಹೊಸ ಉಪಕ್ರಮಗಳು ಕೈಗೊಳ್ಳಲ್ಪಟ್ಟಿದ್ದು, ಗ್ರಾಮೀಣ ಪ್ರದೇಶದ ಜನತೆಗೆ ಆರೋಗ್ಯ ಮತ್ತು ಅರಿವು ನೀಡುವ ಹಿತ ಚಿಂತನೆಯ ಉದ್ದೇಶದಿಂದ ಆರೋಗ್ಯ ಇಲಾಖೆ ಮತ್ತು ಆಯುಷ್ ಇಲಾಖೆಯ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಇದರಿಂದ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತಕ್ಷಣ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಯಿತು.

ಇದರೊಂದಿಗೆ, ಸಾವಯವ ಆಹಾರ ಮತ್ತು ಉತ್ಪನ್ನಗಳ ಮುಂಗಟ್ಟುಗಳು ಜನರಿಗೆ ಕೃಷಿ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸಿದವು. ಮಕ್ಕಳು ಮತ್ತು ವಯಸ್ಕರು ಭಾಗವಹಿಸುವ ವಿವಿಧ ಮನರಂಜನೆ ಚಟುವಟಿಕೆಗಳು, pottery (ಮಡಿಕೆ ತಯಾರಿಕೆ) ಕಾರ್ಯಾಗಾರ, ಕುದುರೆ ಸವಾರಿ, ಹಾಗೂ ಇತರ ಮನೋರಂಜನ ಚಟುವಟಿಕೆಗಳು ಜನರ ಗಮನಸೆಳೆದವು. ಸರ್ವಜನಿಕರಿಗಾಗಿ ವಾಲಿಬಾಲ್ ಮತ್ತು ಥ್ರೋಬಾಲ್, ಹಗ್ಗ ಜಗ್ಗಾಟ, ಮತ್ತು ಹಿರಿಯರ ಕ್ರಿಕೆಟ್ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳು ವಿಶೇಷವಾಗಿ ಆಯೋಜಿಸಲ್ಪಟ್ಟವು. ಗಾನ, ನೃತ್ಯ, ಚಿತ್ರಕಲೆ, ಕವನ ವಚನ ಮತ್ತು ಚರ್ಚಾ ಸ್ಪರ್ಧೆಗಳು, ಶಾಲಾ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿದವು. ಈ ಎಲ್ಲ ಚಟುವಟಿಕೆಗಳು ಮಕ್ಕಳಲ್ಲಿ ಸೃಜನಾತ್ಮಕತೆ, ತಂಡಕಾರ್ಯ ಮತ್ತು ಶಿಸ್ತಿನ ಮಹತ್ವವನ್ನು ಬೋಧಿಸಿದವು.

ಶ್ರೀ ಗವಿ ಸಿದ್ದೇಶ್ವರ ಗುಹಾ ದೇವಾಲಯವು ಕೇವಲ ಧಾರ್ಮಿಕ ಸ್ಥಳವಲ್ಲ; ಇದು ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆಯ ಕೇಂದ್ರವಾಗಿದೆ. ದೇವಾಲಯದ ಇತ್ತೀಚಿನ ಉತ್ಸವಗಳು, ಜನರ ಆರೋಗ್ಯ, ಮನರಂಜನೆ, ಐಕ್ಯತೆಗೆ ಮಹತ್ವ ನಿಡಿವೆ.

ಆಹಾರ, ಆರೋಗ್ಯ, ಕ್ರೀಡೆ, ಮನರಂಜನೆ, ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಎಲ್ಲರಿಗಾಗಿ ಸಮಾನವಾಗಿ ಲಭ್ಯವಾಗುವಂತೆ ಕಾರ್ಯ ನಿರ್ವಹಿಸುವ ಮೂಲಕ ದೇವಾಲಯವು ಗ್ರಾಮೀಣ ಜನತೆಯೊಂದಿಗೆ ಬದ್ಧತೆಯನ್ನು ತೋರಿಸಿದೆ. ಈ ರೀತಿಯ ಸಮಗ್ರ ಕಾರ್ಯಕ್ರಮಗಳು ಭಕ್ತರಿಗೆ ಮಾತ್ರವಲ್ಲ, ಸಮುದಾಯದ ಎಲ್ಲಾ ವರ್ಗದ ಜನರಿಗೆ ಒಗ್ಗಟ್ಟಿನ ಸಂದೇಶ ನೀಡುವ ಕಾರ್ಯವನ್ನು ಮಾಡುತ್ತಿವೆ.

ಶ್ರೀ ಗವಿ ಸಿದ್ದೇಶ್ವರ ಗುಹಾ ದೇವಾಲಯ, ಆಗಳಿ, ಭಕ್ತರಿಗಾಗಿ ಶಾಂತಿ, ಸಮಗ್ರ ಸೇವೆ ಮತ್ತು ಸಾಂಸ್ಕೃತಿಕ ಪ್ರೇರಣೆಯ ಕೇಂದ್ರವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಬೆಳವಣಿಗೆಯನ್ನು ಸಾಧಿಸುವ ಭರವಸೆ ಮೂಡಿಸಿದೆ.

ಹಾಗೂ ಗ್ರಾಮದಿಂದ ಹೊರ ಉಳಿದಿರುವ ನಗರವಾಸಿಗಳಲ್ಲಿ ತಮ್ಮ ಮೂಲ ಗ್ರಾಮದ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಹೆಮ್ಮೆ ಮೂಡಿಸುವುದರ ಜೊತೆಗೆ ನಗರವಾಸಿಗಳು ಗ್ರಾಮ ವಾಸಿಗಳೊಂದಿಗೆ ಬೆರೆತು ಮತ್ತು ತಮ್ಮ ವಿದ್ಯಾವಂತ ಮಕ್ಕಳನ್ನು ತಮ್ಮ ಮೂಲ ಸಂಸ್ಕೃತಿಗೆ ಪರಿಚಯಿಸುವ ಮತ್ತು ಇದರ ಗ್ರಾಮೀಣ ಸೊಗಡನ್ನು ಹೊರ ಜಗತ್ತಿಗೆ ತಲುಪಿಸುವ ವಿಶೇಷ ಪ್ರಯತ್ನ ಮಾಡಲಾಗಿದೆ.

ಅನುಸರಿಸಿ