ಶ್ರೀ ಗವಿಸಿದ್ದೇಶ್ವರ ಕ್ಷೇತ್ರ

ಗವಿಸಿದ್ದೇಶ್ವರ ದೇವಾಲಯ

ಪ್ರಕೃತಿ ಮತ್ತು ಆಧ್ಯಾತ್ಮದ ಅದ್ಭುತ ಸಂಗಮ

ಉತ್ತರ ಕೊಡಗಿನ ಆಗಳಿ ಗ್ರಾಮದಲ್ಲಿರುವ ಈ ದಿವ್ಯ ಕ್ಷೇತ್ರವು ಭಕ್ತಿ, ಶಾಂತಿ ಮತ್ತು ನಿಸರ್ಗದ ಅನುಭವವನ್ನು ನೀಡುತ್ತದೆ.

ದೇವಾಲಯದ ಬಗ್ಗೆ

ಶ್ರೀ ಗವಿಸಿದ್ದೇಶ್ವರ ಕ್ಷೇತ್ರ

ನೋಂದಣಿ ಸಂಖ್ಯೆ

ಕೆ. ಓ. ಡಿ. ಎಸ್. 67/2007-08

ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ವ್ಯಾಪ್ತಿಯ ಹಸಿರು ಕಾನನದ ನಡುವೆ ನೆಲೆಸಿರುವ ಈ ದೇವಾಲಯವು ಪ್ರಕೃತಿಯ ಮಡಿಲಲ್ಲಿ ಅಡಗಿರುವ ಅಪರೂಪದ ಪವಿತ್ರ ಕ್ಷೇತ್ರ.

ಏಕಶಿಲೆಯಿಂದ ನೈಸರ್ಗಿಕವಾಗಿ ರೂಪಗೊಂಡಿರುವ ಈ ಗುಹಾಂತರ ದೇವಾಲಯವು ಪ್ರಕೃತಿಯ ಅದ್ಭುತ ಕಲಾಕೃತಿ. ಒಳಗೆ ಶಿವಲಿಂಗ ಮತ್ತು ಲಿಂಗೈಕ್ಯರಾದ ಗವಿಸಿದ್ದೇಶ್ವರರ ದೇಹದ ಆಕೃತಿ ಹೊಂದಿರುವ ಈ ಗುಹೆ ಭಕ್ತರ ನೈಜ ಆಧ್ಯಾತ್ಮಿಕ ಅನುಭವ ನೀಡುತ್ತದೆ.

ಶಿವಶರಣ ಶ್ರೀ ಗವಿಸಿದ್ದೇಶ್ವರರು ಇಲ್ಲಿ ತಪಸ್ಸು ಮಾಡಿ ಜೀವನ್ಮುಕ್ತಿ ಪಡೆದರೆಂಬ ನಂಬಿಕೆ ಇದೆ. ತಲೆಮಾರುಗಳಿಂದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿಗೆ ಆಗಮಿಸುತ್ತಾರೆ.

ಪ್ರಶಾಂತ ವಾತಾವರಣ, ಪಕ್ಷಿಗಳ ಕಲರವ, ಮತ್ತು ದೈವಿಕ ಶಕ್ತಿಯ ಅನುಭವ — ಇಲ್ಲಿಗೆ ಬಂದವರು ಮರಳಿ ಬರಲೇಬೇಕು ಎಂದೆನಿಸುತ್ತದೆ.

ದೇವಾಲಯ ವತಿಯಿಂದ ಹಮ್ಮಿಕೊಳ್ಳಲಾಗುವ ಸಾಮಾಜಿಕ ಕಾರ್ಯಕ್ರಮಗಳು

ವಿಶೇಷತೆಗಳು

ಈ ಕ್ಷೇತ್ರವೇಕೆ ವಿಶೇಷ?

ನಿಸರ್ಗ ಸೌಂದರ್ಯ

ಸುತ್ತಲೂ ಹಸಿರು ಅರಣ್ಯ ಮತ್ತು ವನ್ಯಜೀವಿ ಒಡನಾಟದ ಅದ್ಭುತ ಅನುಭವ ಇಲ್ಲಿ ದೊರೆಯುತ್ತದೆ.

ಗುಹಾಂತರ ದೇವಾಲಯ

ಗುಹಾಂತರ ದೇವಾಲಯ ಏಕಶಿಲೆಯಿಂದ ನಿರ್ಮಿತ ಪ್ರಕೃತಿಯ ವಿಸ್ಮಯ ಹಾಗೂ ಐತಿಹಾಸಿಕ ಸ್ಥಳವಾಗಿದೆ.

ಭಕ್ತಿಯ ಕೇಂದ್ರ

ಶತಮಾನಗಳಿಂದ ಪೂಜಾ ಕೈಂಕರ್ಯ ನಡೆಯುತ್ತಿರುವ ಪವಿತ್ರ ಮತ್ತು ಪ್ರಸಿದ್ಧ ಕ್ಷೇತ್ರವಾಗಿದೆ.

ದಳವಾಯಿ ಕೆರೆ ನೋಟ

ದೇವಾಲಯ ಕೆಳಭಾಗದಲ್ಲಿ ಇರುವ ಐತಿಹಾಸಿಕ ಹಿನ್ನೆಲೆ ಉಳ್ಳ ದಳವಾಯಿ ಕೆರೆಯ ಅದ್ಭುತ ದೃಶ್ಯ . ಇಲ್ಲಿ ವರ್ಷಪೂರ್ತಿ ನೀರು ತುಂಬಿದ್ದು ಸುತ್ತಲಿನ ಅರಣ್ಯದ ಪ್ರಾಣಿ ಪಕ್ಷಿಗಳಿಗೆ ದಣಿವು ನೀಗುತ್ತದೆ.

ಹೇಮಾವತಿ ನದಿ

ದೇವಾಲಯದ ಮೇಲ್ಬಾಗದಿಂದ ಕಾಣುವ ಮತ್ತು ಕಟ್ಟೆಪುರ ಅರಣ್ಯ ಅಂಚಿನಲ್ಲಿ ಹರಿಯುವ ಹೇಮಾವತಿ ನದಿಯ ನಯನ ಮನೋಹರ ದೃಶ್ಯ.

ಇತಿಹಾಸ

ರಾಜಮನೆತನದ ಐತಿಹಾಸಿಕ ಮಹತ್ವ

ಕೊಡಗಿನ ಕೊನೆಯ ರಾಜ ಚಿಕ್ಕವೀರರಾಜೇಂದ್ರರು ತಮ್ಮ ಸೈನ್ಯದೊಂದಿಗೆ ಈ ಪ್ರದೇಶದಲ್ಲಿ ಬೀಡುಬಿಟ್ಟಿದ್ದರೆಂಬ ಐತಿಹಾಸಿಕ ದಾಖಲೆಗಳಿವೆ.

ಅವರ ಕಾಲದಲ್ಲಿ ನಿರ್ಮಿಸಲಾದ ದಳವಾಯಿ ಕೆರೆ ಇಂದಿಗೂ ಈ ಪ್ರದೇಶದ ಜನರಿಗೆ ನೀರಿನ ಮೂಲವಾಗಿದೆ.

ರಾಜಮನೆತನದ ಆಶ್ರಯ ಮತ್ತು ಆಧ್ಯಾತ್ಮಿಕ ಮಹತ್ವ — ಎರಡೂ ಒಂದಾಗಿರುವ ಈ ಕ್ಷೇತ್ರವು ಕೊಡಗಿನ ಹೆಮ್ಮೆಯ ಪರಂಪರೆ.

ಅವರ ಆಳ್ವಿಕೆ ಸಾಕ್ಷಿಯಾಗಿ ‘ವಿ’ ಎಂದು ಬರೆಯಲ್ಪಟ್ಟ ಗುರುತಿನ ಕಲ್ಲುಗಳು ಈ ಭಾಗದಲ್ಲಿ ಸ್ಥಾಪಿಸಲ್ಪಟ್ಟಿವೆ.

ಚಿತ್ರಗಳು

ಕ್ಷೇತ್ರದ ಅದ್ಭುತ ದೃಶ್ಯಗಳು

ಗುಹಾಂತರ ದೇವಾಲಯ

ಅರಣ್ಯ ಸೌಂದರ್ಯ

ಬೆಟ್ಟದ ನೋಟ

ಪೂಜಾ ಕೈಂಕರ್ಯ

ನಂಬಿಕೆ

ಶತಮಾನಗಳ ನಂಬಿಕೆ, ಲಕ್ಷಾಂತರ ಭಕ್ತರ ಶ್ರದ್ಧೆ

0 +

ವರ್ಷಗಳ ಇತಿಹಾಸ

12ನೇ ಶತಮಾನದಿಂದ ನಡೆದು ಬಂದಿರುವ ಪರಂಪರೆ

0 +

ವಾರ್ಷಿಕ ಭಕ್ತರು

0 %

ಸೇವೆಗೆ ಮೀಸಲು

ನಿಮ್ಮ ದೇಣಿಗೆ ಭಕ್ತಿ ಮತ್ತು ಸೇವೆಗೆ ಶಕ್ತಿ ನೀಡುತ್ತದೆ

ಈ ಕರ್ಮ ಯೋಗ ಮತ್ತು ಭಕ್ತಿ ಯೋಗ ಮುಖಾಂತರ ನಡೆಯುವ ಸೇವಾ ಪ್ರಯತ್ನದಲ್ಲಿ ಎಲ್ಲರೂ ಭಾಗಿಯಾಗಿ, ಒಂದು ಸಣ್ಣ ಕಾಣಿಕೆ ದೊಡ್ಡ ಬದಲಾವಣೆ ತರಬಹುದು — ಸಮಾಜದ ಒಳಿತಿಗಾಗಿ ನಿಮ್ಮ ಸಹಕಾರವೇ ನಮ್ಮ ಶಕ್ತಿ.